ಕೃಷಿ ವಿಷಯಕ್ಕೆ ಸಂಬಂಧಿಸಿದಂತೆ ಈ ವಿಶ್ವವಿದ್ಯಾಲಯದ ಗ್ರಂಥಾಲಯವು ವಿಶೇಷ ಗ್ರಂಥಾಲಯವಾಗಿರುವುದು. ಉತ್ತಮಗುಣಮಟ್ಟದ ಪುಸ್ತಕಗಳು, ನಿಯತಕಾಲಿಕೆಗಳು, ಪ್ರಬಂಧಗಳು, ವರದಿಗಳು ಹಾಗೂ ಕೈಪಿಡಿಗಳು ಓದುಗರ ಭಂಡಾರವಾಗಿವೆ. ಈ ವಿದ್ಯಾಭಂಡಾರವು ಸುತ್ತಮುತ್ತಲಿನ ವಿದ್ಯಾಸಂಸ್ಥೆಗಳಿಂದ ವಿದ್ಯಾರ್ಥಿಗಳನ್ನು ಲೋಹಚುಂಬಕದಂತೆ ಆಕರ್ಷಿಸುತ್ತಿದೆ. ಆಧುನಿಕ ಇಲೆಕ್ಟ್ರಾನಿಕ್ ತಂತ್ರಜ್ಞಾನ ಆಧಾರಿತ ನಿಯತಕಾಲಿಕೆಗಳು, ಪ್ರಬಂಧಗಳು ಹಾಗೂ ಅಂತರ್ಜಾಲದ ಮಾಹಿತಿಗಳು ವೇಗಗತಿಯಲ್ಲಿ ಬೆಳವಣಿಗೆ ಆಗುತ್ತಿದ್ದು ಓದುಗರು ಇರುವಲ್ಲಿಗೇ ಗ್ರಂಥಾಲಯವನ್ನು ತಲುಪಿಸುವ ಕಾರ್ಯ ಮಾಡುತ್ತಲಿದೆ.